ಅವನು ಕ್ರೇಜಿ, ನಾನು ಅವನ ಬಗ್ಗೆ ಕ್ರೇಜಿ.
ಆಗಿನ್ನು
ನನ್ನ ವಯಸ್ಸು ನಾಲ್ಕು, ಅಜ್ಜಿ-ತಾತನೊಡನೆ ಪ್ರೇಮಲೋಕ ಸಿನಿಮಾ ನೋಡಿದ ನೆನಪು
ಈಗಲೂ ಮನದಲ್ಲಿ ಲಾಕು.
ರಣದೀರ ನೋಡಿ ಲವು ಲವು
ಸಾಂಗಿಗೆ ಹಾಡಿದ್ದು ಹೌದು ಅಪ್ಪನಿಂದ ಒದೆ
ತಿಂದಿದ್ದು ಹೌದು. ಅಂಜದ ಗಂಡು
ಸಿನಿಮದಿಂದ ನಮ್ ಮನೆಯ ಹಲವಾರು
ಗಾಜುಗಳು ಆಯ್ತು ಪುಡಿ ಪುಡಿ,
ಇನ್ನು ಮುಂದೆ ಸಿನಿಮ ಪದವೇ
ಇವಳ ಕಿವಿಗೆ ಬೀಳಬಾರದು ಅಂತ
ಇಡೀ ಸಂಸಾರ ಸ್ಯಂಡಲ್ವುಡ್ ತ್ಯಜಿಸಲು
ಆದ್ರು ರೆಡಿ. ಬುದ್ದಿವಂತನಿಗೆ ಹಲವಾರು
ದಾರಿ ಅನ್ನೋ ಗಾದೆ ನನ್ನ ಲೈಪ್ ನಲ್ಲಿ
ಸಕ್ಕತ್ ನಿಜವಾಯಿತು ಬಿಡಿ.
ರಾಮಚಾರಿ
ಗೆದ್ದಾಗ ಅಜ್ಜಿ ಕೈಲಿ ಜಾಮೂನು
ಮಾಡಿಸಿ ಹಂಚಿದುಂಟು. ಶಾಂತಿ-ಕ್ರಾಂತಿ ಸೋತಾಗ
ಅತ್ತಿದೂ ಉಂಟು.
ಯಾಕಿಷ್ಟು
ಕ್ರೇಜಿ? ರವಿ-ಮಾಮನ ಬಗ್ಗೆ?
ಈಗ್ಯಾಕೆ ಅವರ ಮಾತು? ಇತ್ತೀಚಿನ
ದಿನಗಳಲ್ಲಿ ರವಿಚಂದ್ರನ್ ಟಿ.ವಿ ಮತ್ತು ರೇಡಿಯೊ
ಮಾದ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೋಳ್ಳುತಿದಾರೆ, ಯಾಕಿರಬಹುದು, ಕುತೂಹಲ ಮೂಡಿಸಿತು ಮನಸ್ಸಿನಲ್ಲಿ
ಗೋಂದಲ.
ಹೇಗೋ ಕೆಲಸ ನಿಮಿತ್ತ ಹೊರಟೆ ಮಾಡಲು ಭೇಟಿ, ನೇರ ಮಾತಲ್ಲಿ ಅವರಿಗೆ ಯಾರು ಇಲ್ಲ ಸರಿಸಾಟಿ, ಅವರೊಡನೆ ಮಾತನಾಡಿದಾಗ ನೆನಪಾಯ್ತು
ಚಾಟಿ. ಇದಿದ್ದು ಒಂದೇ ಪ್ರಶ್ನೆ, ಸಿಕ್ಕಿದು ಕೂಡ ಒಂದೇ ಉತ್ತರ, ಆಮೇಲ್ ಬಾರಮ್ಮ!!
ಸ್ಟಾರ್ಗೆ
ಅಷ್ಟು ಗತ್ತು, ನನಗೂ ಮೂವತ್ತು
ವರ್ಷಗಳ ಮತ್ತು, "ಒಂದೇ ಒಂದು ಫೊಟೋ"
ಅಂದೆ, ಹುಸ್ಸಪ್ಪಾ ಕ್ಲಿಕಿಸಿತಂದೆ, ಅದು ಇಂದು
ನಿಮ್ ಮುಂದೆ.
Happy Birthday Ravi-mama, nimgaagi Colors Kannada page
nalli naanu baredha message -
0 comments:
Post a Comment